ಮಣಿಪಾಲ್ ಆಸ್ಪತ್ರೆಯನ್ನು ಖರೀದಿಸುವ ನಿರ್ಣಾಯಕ ಒಪ್ಪಂದಕ್ಕೆ ಸಹಿ ಮಾಡಿದ ಟೆಮಾಸೆಕ್ ಕಂಪೆನಿ

 



ಬೆಂಗಳೂರು: ಮಣಿಪಾಲ್ ಆಸ್ಪತ್ರೆಗಳನ್ನು ಮುನ್ನಡೆಸುವ ಮಣಿಪಾಲ್ ಹೆಲ್ತ್ ಎಂಟರ್‌ಪ್ರೈಸಸ್‌ನಲ್ಲಿ (ಎಂಎಚ್‌ಇ) ಹೆಚ್ಚುವರಿಯಾಗಿ ಶೇಕಡ 41ರಷ್ಟು ಷೇರುಗಳನ್ನು ಖರೀದಿಸುವ ನಿರ್ಣಾಯಕ ಒಪ್ಪಂದಕ್ಕೆ ಸಹಿ ಮಾಡಿರುವುದಾಗಿ ಸಿಂಗಪುರ ಮೂಲದ ಟಮಾಸೆಕ್ ಕಂಪನಿ ಹೇಳಿಕೊಂಡಿದೆ.

ಈ ಸ್ವಾಧೀನ ಪ್ರಕ್ರಿಯೆಯ ಬಳಿಕ ಎಂಎಚ್‌ಇನಲ್ಲಿ ಟೆಮಾಸೆಕ್ ಷೇರುಪಾಲು ಶೇ 59ಕ್ಕೆ ಏರಿಕೆ ಆಗಲಿದೆ. ಮಣಿಪಾಲ್ ಸಮೂಹದ ಷೇರುಪಾಲು ಶೇ 30ಕ್ಕೆ ಇಳಿಕೆ ಆಗಲಿದೆ. ಈ ವಹಿವಾಟಿನ ಅಂದಾಜು ಮೌಲ್ಯ 16 ಸಾವಿರ ಕೋಟಿ ಎನ್ನಲಾಗುತ್ತಿದೆ. ಅದರೆ ಮೌಲ್ಯವನ್ನು ಇದುವರೆಗೆ ಅಧಿಕೃತವಾಗಿ ಘೋಷಿಸಿಲ್ಲ.

ನ್ಯಾಷನಲ್ ಇನ್‌ವೆಸ್ಟ್‌ಮೆಂಟ್ ಆ್ಯಂಡ್ ಇನ್‌ಫ್ರಾಸ್ಟ್ರಕ್ಟರ್ ಫಂಡ್ (ಎನ್‌ಐಐಎಫ್) ತಾನು ಹೊಂದಿರುವ ಅಷ್ಟೂ ಪ್ರಮಾಣದ ಷೇರುಗಳನ್ನು ಟಮಾಸೆಕ್‌ಗೆ ಮಾರಾಟ ಮಾಡಲಿದೆ.ಟಮಾಸೆಕ್ ಕಂಪನಿಯು ಟಿಪಿಜಿ ಮತ್ತು ಮಣಿಪಾಲ್ ಸಮೂಹದ ಅಧ್ಯಕ್ಷ ರಂಜನ್ ಪೈ ಅವರ ಕುಟುಂಬದವರಿಂದ ಷೇರುಗಳನ್ನು ಖರೀದಿಸಲಿದೆ ಎಂದು ಕಂಪನಿಗಳು ಜಂಟಿ ಹೇಳಿಕೆ ನೀಡಿವೆ.

ಆದರೆ, ಖರೀದಿಗೆ ಸಂಬಂಧಿಸಿದ ಹಣಕಾಸಿನ ವಿವರಗಳನ್ನು ಬಹಿರಂಗಪಡಿಸಿಲ್ಲ. ಪ್ರತಿ ವರ್ಷ ಈ ಆಸ್ಪತ್ರೆ ಸಮೂಹ ಐವತ್ತು ಲಕ್ಷ ಜನರಿಗೆ ಚಿಕಿತ್ಸೆ ನೀಡುತ್ತಿದೆ. ಇತ್ತೀಚಿಗೆ ಕೊಲೊಂಬಿಯಾ ಮತ್ತು ವಿಕ್ರಮ ಆಸ್ಪತ್ರೆಯನ್ನು ಮಣಿಪಾಲ್ ಆಸ್ಪತ್ರೆ ಖರೀದಿಸಿತ್ತು. 

Comments